ಸೋಮವಾರ, ಫೆಬ್ರವರಿ 16, 2015

ಮತ್ತೆ-ಮತ್ತೆ ಕಾಡಿದ ಗೆಳೆಯ


ಕನ್ನಡಖ್ಯಾತಯುವಕಥೆಗಾರ ವಸುಧೇಂದ್ರರ ಮೋಹನ ಸ್ವಾಮಿಕಥಾ ಸಂಕಲನ ಓದಿದ ಮೇಲೆ ಸಣ್ಣ ಲೇಖನ ಬರೆಯಬೇಕೆಂಬ ಅಭಿಲಾಷೆಒಡಮೂಡಿತು.ಸುಮಾರು10 ಕಥೆಗಳ ಸಂಕಲನದಲ್ಲಿ5ಕಥೆಗಳು ಪುರುಷ ಸಲಿಂಗ ಕಾಮದ ಬಗೆಗಿನ ವಿಚಾರವನ್ನು ಕೇಂದ್ರಿಕರಿಸಿ ನಿರೂಪಿಸಲಾಗಿದೆ.ಸಲಿಂಗ ಕಾಮದ ಪರಿಕಲ್ಪನೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸರ್ವ ಸಮ್ಮತವಾದದ್ದು . ಭಾರತೀಯ ಪುರಾಣಗಳಲ್ಲಿ ಸಲಿಂಗ ಕಾಮದ ಬಗ್ಗೆ ಹಲವಾರು ಮಾಹಿತಿಗಳಿದ್ದು ,ಆಧುನಿಕಇಂಡಿಯನ್ ಸೊಸೈಟಿಯಲ್ಲಿ ಲೈಂಗಿಕತೆಯ ಬಗ್ಗೆ ಮಡಿವಂತಿಕೆಯನ್ನು ಪ್ರದಶರ್ಿಸುತ್ತಾ ಬಂದಿರುವಒಂದುಗುಂಪನ್ನುಗುರುತಿಸಬಹುದಾಗಿದೆ .
ಮಾಹಿತಿ ತಂತ್ರಜ್ಞಾನಗಳಲ್ಲಿ ಮುಂದುವರೆದ ಯುಗದಲ್ಲೂ ಕ್ಯಾಂಪಸ್ಗಳಲ್ಲಿ ಯುವ ಸಮುದಾಯವು  ಹೆಣ್ಣುತನವನ್ನು ಪ್ರದಶರ್ಿಸುವ ಪುರುಷರನ್ನು ಕಿಳಾಗಿ ಕಾಣುವ ಮೂಲಕಅವರನ್ನು ನೈತಿಕವಾಗಿ ಕುಗ್ಗಿಸಿ , ಬದುಕಿನುದ್ದಕ್ಕುಕೊರಗುವಂತೆ ಮಾಡುತ್ತಿದೆ .
ಪಿಯುಸಿಓದುತ್ತಿರುವ ಸಂಧರ್ಭದಲ್ಲಿ ಗೆಳೆಯನೋರ್ವನ ವರ್ತನೆಯುಕ್ಯಾಂಪಸ್ನವಿದ್ಯಾಥರ್ಿವಲಯದಲ್ಲಿ ಸದಾಚಚರ್ಿತವಾಗುತ್ತಿತ್ತು .ಅವನು ಎಲ್ಲರಎದುರುಅಪಹಾಸ್ಯಕ್ಕಿಡಾಗುವಜೋಕರ್ಆಗಿದ್ದ ಪ್ರತಿಯೋಬ್ಬರಕುಹಕದ ಮಾತಿಗೂ ನಿಲರ್ಿಪ್ತತೆಯ ಮಂದಹಾಸ ಬೀರುವಆತ ನಿಜವಾಗ್ಲು ಸಂಯಮ ಶೀಲನು ,ಸಹನಾ ಮೂತರ್ಿಯುಆಗಿದ್ದನು . ಒಂದು ದಿನವು ಗೆಳೆಯನೆಂದು ಒಪ್ಪಿಕೊಳ್ಳದ ನಾವು ಅವನ ನಿಜವಾದ ಹೆಸರನ್ನು ಮರೆಸುವಷ್ಟು ಮರೆಯುವಷ್ಟು ಮರೆತಿದ್ದೇವು .ಕಾರಣಅವನನ್ನು ಚಕ್ಕ ಸಿಕಂಡಿ , ಗೇ , ಎಂದುಕರೆಯುವುದು ನಮ್ಮ ಅವಿವೇಕದ ಪರಮಾವಧಿಯಾಗಿತ್ತು .
ಹೌದು ಗಂಡಿನಂತೆ ಮೀಸೆ ಹೊತ್ತು , ಗಂಡಿನಂತೆ ಸಮವಸ್ತ್ರ ಧರಿಸುವ ಆತನ ವ್ಯಕ್ತಿತ್ವ ,ದ್ವನಿ ಹೆಣ್ಣನ್ನು ಹೊಲುತ್ತಿತ್ತು .ಸೊಂಟ ಬಳುಕಿಸಿ ನಡೆದು ,ಶೃಂಗಾರ ಪ್ರದಶರ್ಿಸುವ ಅತನ ಬಗ್ಗೆ ಒಂದು ರೀತಿಯ ಅಸಹ್ಯ ಮೂಡಿದ್ದಂತು ಸುಳ್ಳಲ್ಲ .
ಕ್ಯಾಂಪಸ್ನಲ್ಲಿ ಅವನನ್ನು ರ್ಯಾಗ್ ಮಾಡಿ ಮಜಾ ಪಡೆಯುವ ಗುಂಪಿಗೆನೂ ಬರವಿರಲಿಲ್ಲ . ಕೆಲವರು ಅವನು ಹುಡುಗರ ಜೊತೆ ಸೆಕ್ಸ್ನಲ್ಲಿ ತೊಡಗುವವನೆಂದು,ಮತ್ತೆ ಕೆಲವರು ಗಂಡಿಗಿರಬೇಕಾದ ಜನನಾಂಗ ವಿಲ್ಲವೆಂದು ಅಸಹ್ಯವಾಗಿ ಬಣ್ಣಿಸಿದ್ದು ಕಮೆಂಟ್ಸ್ ಮಾಡಿದ್ದು ಇದೆ .
ತರಗತಿಯ ಪ್ರಾರಂಭದ ದಿನಗಳಲ್ಲಿ ಟಾಯ್ಲೇಟ್ ಬಳಿ , ಸಿನಿಯರ್ಸ್ ನೀನು ಗಂಡೊ ,ಹೆಣ್ಣೊಅಥವಾ ನಪುಂಸಕ ಲಿಂಗಿಯೋಎಂದು ಪ್ಯಾಂಟ್ ಬಿಚ್ಚಿತೊರಿಸಲು ವಿಕೃತವಾಗಿ ಪಿಡಿಸಿದ್ದರು .ಎಷ್ಟೆ ಬೇಡಿಕೊಂಡರು ,ಅತ್ತರು ಸಿನಿಯರ್ಸ್ ಪಟ್ಟು ಬಿಡಲಿಲ್ಲ . ಅವನಕಣ್ಣಿರುಅವರ ಮೊಗದಲ್ಲಿ ರಾಕ್ಷಕತ್ವದ ಗಹಗಹಿಕೆಯನ್ನು ಒಡಮೂಡಿಸಿದ್ದಂತು ಸುಳ್ಳಲ್ಲ. ಅವನ ರೋಧನಅಕ್ರಂದನ ಮುಗಿಲು ಮುಟ್ಟಿತು.ಸಹಪಾಠಿಗಳಾದ ನಾವು ಮನುಕುಲಕ್ಕೆ ಅಪವಾದಕರಂತೆಕೈ ಕಟ್ಟಿ ಮೂಕ ಪ್ರೇಕ್ಷಕರಾಗಿಯು,ರಸಅಸ್ವಾದಕರಾಗಿಯು ನಿಂತು ಬಿಟ್ಟೆವು.ತು..! ನಮ್ಮಜನ್ಮಕ್ಕಿಷ್ಟುಬೆಂಕಿಹಾಕ್ಲಿಕೆ.ಈಗಯೋಚಿಸುವಾಗನಮ್ಮಷ್ಟು ಕೆಟ್ಟ ಜನಗಳು ಭೂಮಿ ಮೇಲೆ ಇರ್ಲಿಕ್ಕೆ ಸಾಧ್ಯವೇಇಲ್ಲಅಂತನ್ನಿಸುತ್ತದೆ . ದೇವರ ದಯೆಯೋಅಥವ ಮುಗ್ದ ಮನದ ಗೆಳೆಯನ ಒಳ್ಳೆತನವೋ ಸರಿಯಾದ ಸಮಯಕ್ಕೆಉಪನ್ಯಾಸಕರೊರ್ವರುಅಲ್ಲಿಗೆ ಬಂದುಅವನನ್ನುಕಾಪಾಡಿ,ರ್ಯಾಗ್ ಮಾಡಿದಗುಂಪನ್ನು ಕಾಲೇಜಿನಿಂದ ಸಸ್ಪೇಂಡ್ ಮಾಡಲಾಯಿತು .ಅನಂತರ ಅವನೆಂದು ಮೂತ್ರ ವಿರ್ಸಜನೆಗಾಗಿಕ್ಯಾಂಪಸ್ನಟಾಯ್ಲೇಟ್ ಬಳಸಿದ್ದನ್ನು ನಾವು ಕಾಣಲಿಲ್ಲ.

ಪಾಪ ತರಗತಿಯಲ್ಲಿ ಸೆಮಿನಾರ್ ಮಾಡುವಾಗ ಅವನ ದ್ವನಿಯನ್ನು ಕೇಳಿ ಕೆಲವು ಉಪನ್ಯಾಸಕರುಕೆಟ್ಟದ್ದಾಗಿ ಹಲ್ಲುಕಿರಿದುಅಪಹಾಸ್ಯ ಮಾಡಿದ್ದುಇದೆ . ಅವನೆಂದು ತನಗಾಗುತ್ತಿದ್ದಅವಮಾನಕ್ಕೆ ಪ್ರತಿಕಾರದದ್ವನಿಯನ್ನು ಮೊಳಗಿಸಲಿಲ್ಲ . ಶಾಂತಚಿತ್ತವಾಗಿಒಡಲಾಳದ ನೋವನ್ನು ನುಂಗಿ ,ಮತ್ತೆ ಮತ್ತೆ ಸಮಾಜಕ್ಕೆ ಸವಾಲು ಹಾಕಿ ಬಾಳುವ ಹರಿಸಾಹಸಕ್ಕೆ ಕೈ ಹಾಕಿದ್ದ .
ವರ್ಷಗಳು ಉರುಳಿದ್ದೆ ಗೊತ್ತಾಗ್ಲಿಲ್ಲ , ಪಿಯುಸಿ ಮುಗಿಸಿ 4 ವರ್ಷಗಳ ಕಳೆಯಿತು. ಇತ್ತೀಚೆಗೆ ಆಪ್ತ ಸ್ನೇಹಿತಕಾಲ್ ಮಾಡಿಅಜರ್ೆಂಟಾಗಿ ಮಾತನಾಡ ಬೇಕು . ನಮ್ಮಮಾಮೂಲಿ ಅಡ್ಡಕ್ಕೆ ಬಾ ಮಗ ಅಂತಂದ. ಅಲ್ಲಿ ತೆರಳಿಅವನ ಮಾತು ಕೇಳಿ ಮನಸ್ಸಿಗೆ ತುಂಬಾ ಬೇಜಾರಾಯ್ತು . ಅದೇ... ಹೆಸರನ್ನು ಮರೆಸುವಷ್ಟು ಮರೆಯುವಷ್ಟು ಮರೆತ ಗೆಳೆಯ ಇಂದು ಹೆಣ್ಣು ಮಕ್ಕಳ ರೀತಿಡ್ರಸ್ ಮಾಡಿಕೊಂಡು ,ತಲೆಗೆ ವಿಗ್ ಧರಿಸಿ ಬಸ್ಸ್ ಸ್ಟಾಂಡ್ , ಅಂಗಡಿಗಳಲ್ಲಿ ಕಲೆಕ್ಷನ್ ಮಾಡಿ ( ಭಿಕ್ಷೆ ಬೇಡಿ ) ತನ್ನ ಬದುಕನ್ನು ಬಾಳುತ್ತಿದ್ದಾನೆ .ಒಟ್ಟಿನಲ್ಲಿ ನೂರು ಪ್ರತಿಶತ ಅವನ ವ್ಯಕ್ತಿತ್ವವನ್ನು ಹೆಣ್ಣಿನಂತೆ ಪರಿವತರ್ಿಸಿಕೊಂಡಿದ್ದಾನೆ .
ನಗರದ ಪ್ರಮುಖಲಾಡ್ಜ್ಒಂದರಇಕಟ್ಟಾದಕೊಠಡಿಯನ್ನುತನ್ನ ವಾಸ್ತವ್ಯದ ತಾಣವಾಗಿಸಿಕೊಂಡಿದ್ದ ಗೆಳೆಯ,ರೂಂ ತುಂಬಾ ಹೆಂಗಸರಚೂಡಿದಾರ್ ,ಸೀರೆ ,ಕುಪ್ಪಸ , ಲಿಪ್ಟ್ ಸ್ಟಿಕ್ , ಫರ್ಪೂಮ್ (ಸುಗಂಧದ್ರವ್ಯ ) ಗಳನ್ನು ತುಂಬಿಕೊಂಡಿದ್ದ .4 ಭಾಷೆ ಸ್ಪಷ್ಟವಾಗಿ ಮಾತನಾಡುತ್ತಿದ್ದ , ಪದವಿ ಪಡೆದುಉದ್ಯೋಗದಲ್ಲಿರಬೇಕಾದ ಗೆಳೆಯನಿಗೆ ಯಾವುದೇಉದ್ಯೋಗದೊರಕಲಿಲ್ಲ .ಕಾರಣ ಅವನ ಹೆಣ್ಣ್ತನದ ವರ್ತನೆ . ಮನೆಮಂದಿಯಿಂದ , ಸಮಾಜದಿಂದ ಮತ್ತೆ ಮತ್ತೆ ತುಳಿತಕೊಳಗಾದ ಅವನು ಬೇರೆದಾರಿಕಾಣದೆ ಮಂಗಳ ಮುಖಿಯಂತೆ ವೇಶ ಧರಿಸಿ ಭಿಕ್ಷೆ ಬೇಡಿ , ಎನ್ ಜಿ ಒಂದರ ಸದಸ್ಯನಾಗಿಯಾರಿಗೂ ತಿಳಿಯದಂತೆ ಮೇಲ್ ಸೆಕ್ಸ್ ವರ್ಕರ್ (ಎಂ ಎಸ್ ಎಂ )ಆಗಿಯುಕಾರ್ಯನಿರ್ವಹಿಸುತ್ತಿದ್ದಾನೆ . ಕಾನೂನಾತ್ಮಕವಾಗಿ ಸಲಿಂಗ ಕಾಮ ತಪ್ಪಾದರೂ ಅವನ ಬದುಕನ್ನು ರೀತಿಯಾಗಿಕಟ್ಟಿಕೊಂಡಿದ್ದಾನೆ .
ನಮ್ಮ ಸಮಾಜದಲ್ಲಿ ಮುಖ್ಯವಾಗಿ ಕ್ಯಾಂಪಸ್ಗಳಲ್ಲಿ ಎಷ್ಟೋ ಮಂದಿ ಯುವಕರು ಮಾನಸಿಕವಾಗಿಯು , ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದಾಗಿಯೋಒಂದು ರೀತಿಯ ನಪುಂಸಕತೆಯನ್ನು ಮೈಗೂಡಿಸಿಕೊಂಡು ಅಪಹಾಸ್ಯಕ್ಕಿಡಾಗುವುದುಇದೇ ಮೂದಲೆನಲ್ಲ .ಇಂತಹ ಸಂಧಿಘ್ನವಾದ ವ್ಯಕ್ತಿತ್ವವನ್ನು ಸಮಾಜ ಸ್ವೀಕರಿಸುವ ಬಗೆಯಂತುಅತ್ಯಂತನಿಕೃಷ್ಟವಾದದ್ದಾಗಿದೆ .
ದಯವಿಟ್ಟು ನಿಮ್ಮ ಗೆಳೆಯರ ವ್ಯಕ್ತಿತ್ವವನ್ನು ಲಿಂಗತ್ವದಆಧಾರದಲ್ಲಿ ಅಳೆಯ ಬೇಡಿ .ಒಳ್ಳೆ ಮನಸ್ಸಿನ ಮಾನದಂಡವನ್ನು ಪರಿಗಣಿಸಿ ಸ್ನೇಹಿತರನ್ನು ಸಂಪಾದಿಸಿ ,ಉತ್ತಮ ಸಮಾಜವನ್ನು ರೂಪಿಸಿ .

ಮುಸ್ತಫ .ಕೆ .ಹೆಚ್
ಪ್ರಥಮ ಎಂ ಕನ್ನಡ
ಎಸ್ ವಿ ಪಿ ಕನ್ನಡಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ .ಮಂಗಳೂರು ವಿಶ್ವವಿದ್ಯಾನಿಲಯ