ಮಂಗಳವಾರ, ನವೆಂಬರ್ 25, 2014

ಪುಸ್ತಕ ಪ್ರಪಂಚದ ಬದಲಾದ ಹಾದಿ ...

 ಕಾಲದೊಂದಿಗನ ಓಟ ಮಾನವ ಮನಸ್ಸುಗಳನ್ನು ಸಂಕುಚಿತಗೊಳಿಸುತ್ತದೆ . ಸಣ್ಣ ಸಣ್ಣ ಕೆಲಸಗಳನ್ನೂ ಫಟಾ ಫಟ್ಟಾಗಿ ಮುಗಿಸುವ ಅತುರದಲ್ಲಿ ನಮ್ಮ ಬದುಕಿನ ಭಾವಶೀಲತೆಯನ್ನು ಕಳೆದುಕೊಂಡಿದ್ದೇವೆ . ಸಮಯದ ಅಭಾವ ,ಟೈಮ್ ಮ್ಯಾನೆಜ್ ಮಾಡುವ ಬರದಲ್ಲಿ ಅದೆಷ್ಟೋ  ಸಾಮಾಜಿಕ ಸಾಂಸ್ಕೃತಿಕ  ವಿಚಾರಧಾರೆಗಳನ್ನು ಮೂಲೆಗುಂಪು ಮಾಡಿದ್ದೇವೋ ಅ ಪರಮಾತ್ಮನೆ ಬಲ್ಲ ?
 "ವರ್ತಮಾನ ಭವಿಷ್ಯತ್ತುಗಳ ಹಿಂದೆ ಓಡುವ ಮನುಜನ ಭಾವ ಶೂನ್ಯತೆಯು ತಲೆಮಾರುಗಳಿಂದ ಬಂದ ಸಾಂಸ್ಥಿಕ ಸಂಗತಿಗಳನ್ನು ಜ್ಞಾನ ಶೂನ್ಯಗೊಳಿಸಿದೆ " . ಜ್ಞಾನ ಎಂದಾಗ ನಮ್ಮ ಕಣ್ಣ ಮುಂದೆ ಬಿಂಬಿತವಾಗುವುದು ಪುಸ್ತಕಗಳು ಅಥವಾ ಬರಹ ರೂಪಗಳು .


ಸಿಲಬಸ್ಗಳನ್ನೇ ಓದಲು ಹೆಣಗಾಡುವ ನಮ್ಮಂತಹ ಯುವ ಜನಾಂಗವು ಗ್ರಂಥಾಲಯಗಳಿಗೆ , ಅಂಗಡಿಗೆ ಭೇಟಿ ನೀಡಿ ಪುಸ್ತಕ ಖರೀದಿಸಿ ಓದುವ ಸಾಹಸಕ್ಕೆ ಕೈ ಹಾಕುವರೇ ಎಂದು ನಮ್ಮೋಳಗೆ ಪ್ರಶ್ನೀಸಿಕೊಂಡರೆ ನೂರರಲ್ಲಿ ಹತ್ತು ಮಂದಿ ಹೌದೆನ್ನಬಹುದೇನೊ . ಪುಸ್ತಕದ ಬದನೆಕಾಯಿನ ಯಾರ್ ಓದ್ತಾರೆ , ಪುಸ್ತಕ ಓದುವ ಸಮಯವಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯಬಹುದೆಂಬ ಭಾವನೆಯನ್ನು ಅಭಿವ್ಯಕ್ತಿಸುವ ಯುತ್ ಜನರೇಷನ್ ಒಂದು ಕಡೆಯಾದರೆ , ಅಪ್ಪಿ ತಪ್ಪಿಯು ಕನ್ನಡ ಪುಸ್ತಕಗಳನ್ನು ಓದಲು ಇಚ್ಚಿಸದ ಅಂಗ್ಲ ವ್ಯಾಮೋಹಿಗಳು ಮತ್ತೊಂದು ಕಡೆ . ಇವರ ನಡುವೆ ಕನ್ನಡ ಪುಸ್ತಕ ಜಗತ್ತು ಶ್ರೀಮಂತಿಕೆಯ ಚಿನ್ನದ  ತೊಟ್ಟಿಲ ಬಡ ಕೂಸಾಗಿದೆ .ವಿದೇಶಗಳಲ್ಲಿ ಪ್ರತಿಯೊಬ್ಬ ಯುವಕನ ಕೈಗಳಲ್ಲಿಯೂ ಪುಸ್ತಕಗಳಿರುತ್ತವೆ .ಅದೇ ರೀತಿಯಲ್ಲಿ ನಮ್ಮ ಯುವ ಸಮೂಹ ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವಂತಾಗಬೇಕು , ಎಂದು ಎರಡು ವರ್ಷಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಕನ್ನಡದ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಇವರ ಮಾತು ಈಗಲೂ ಪ್ರತಿ ಧ್ವನಿಸುತ್ತಿದೆಯಾದರೂ ನಾವು ಇನ್ನೂ ಎಚ್ಚೆತ್ತುಕೊಂಡಿಲ್ಲ .ಮುಳ್ಳನ್ನು ಮುಳ್ಳಿನಿಂದ ತೆಗೆಯಿರಿ ಎಂಬ ಗಾದೆ ಮಾತಿನಂತೆ ಆಧುನಿಕತೆಯ ದೋಷಗಳನ್ನು ,ಸಮಸ್ಯೆಗಳನ್ನು ಆಧುನಿಕತೆಯಿಂದ ನಿವಾರಿಸುವ ಪ್ರಯತ್ನಗಳು ಇಂದಿನ ಕಾಪರ್ೋರೇಟ್ ಸಮಾಜದಲ್ಲಿ ಸಾಧ್ಯವಾಗಿದೆ .ಜಾಗತೀಕ ಸಂತೆಯಾಗಿ ಆನಾವರಣಗೊಳ್ಳುತ್ತಿರುವ ಅನ್ಲೈನ್ ಪ್ರಪಂಚದ ಮೂಲಕ ಯುವಕರನ್ನು ಓದಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ 
.ಸ್ಮಾಟರ್್ ಪೊನ್ ಟ್ಯಾಬ್ಲೆಟ್ಗಳಲ್ಲಿ ಅನ್ಲೈನ್ ಮೂಲಕ  ಜ - ಪುಸ್ತಕ (e-book ) ಉಚಿತವಾಗಿಯು , ಪಾವತಿ ದರದ ಮೂಲಕ ಖರೀದಿಸಿ ಓದಬಹುದು . ಹಲವಾರು ಸಾಪ್ಟ್ವೇರ್ಗಳು ಸದಭಿರುಚಿಯ ಎಲ್ಲಾ ಭಾಷೆಗಳ ಪುಸ್ತಕಗಳನ್ನು ಓದುವ ಅವಕಾಶವನ್ನು ವೇದಿಕೆಯಾಗಿ ಕಲ್ಪಸಿಕೊಟ್ಟಿದೆ . ಗೂಗಲ್ ಪ್ಲೇ ಬುಕ್ ,ವಾಟ್ ಎ ಪ್ಯಾಡ್ , ಬ್ಲೂ ಪೈರ್ ರೀಡರ್ ಮುಂತಾದ ರೀಡರ್ ಸಾಫ್ಟ್ವೇರ್ಗಳನ್ನು ನಿಮ್ಮ ಸ್ಮಾಟರ್್ ಪೊನ್ನ ಅಪ್ಲೀಕೇಶನ್ ಸ್ಟೋರಗಳ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು . ಪಿಡಿಎಫ್ ಮಾದರಿಯ ಪುಸ್ತಕಗಳು ಸಹ ದೊರೆಯುತ್ತದೆ .ಕನ್ನಡ ಪುಸ್ತಕ ಜಗತ್ತು ಆಧುನಿಕ ಸಾಫ್ಟ್ವೇರ್ ಜಾಯಮಾನಕ್ಕಾಗಲಿ , e - ಪುಸ್ತಕ ( e-book ) ಪರಿವಾರಕ್ಕಾಗಲಿ ಅಷ್ಟು ಸುಲಭದಲ್ಲಿ ಒಗ್ಗಿಸಿಕೊಳ್ಳದೆ ಮಡಿವಂತಿಕೆಯನ್ನು ಪ್ರದಶರ್ಿಸುತ್ತಿದೆ .ಇದು ವಿಪಯರ್ಾಸವೇ ಸರಿ . ಈ ನಿಟ್ಟಿನಲ್ಲಿ ಸಾಹಿತಿಗಳು ,ಪ್ರಕಾಶಕರು ಸಾಪ್ಟ್ವೇರ್ ಪರಿಣಿತರು ಹಾಗೂ ಸರಕಾರವು ಗಮನ ಹರಿಸಬೇಕಾಗಿದೆ .ಕನ್ನಡಕ್ಕೆ 8  ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ  ಕುವೆಂಪು ,ಬೇಂದ್ರೆ , ಶಿವರಾಮ ಕಾರಂತ .ಮಾಸ್ತಿ ವೆಂಕಟೇಶ ಅಯ್ಯಂಗಾರ್ .ವಿಕೃ ಗೋಕಾಕ್ , ಯು .ಆರ್ . ಅನಂತ ಮೂತರ್ಿ , ಗೀರಿಶ್ ಕನರ್ಾಡ್ ಹಾಗೂ ಚಂದ್ರಶೇಖರ ಕಂಬಾರರ ಸಮಗ್ರ ಕೃತಿಗಳ ಸಂಗ್ರಗಳನ್ನು ಅಂತರ್ ಜಾಲ  ಕನ್ನಡದ ಜ್ಞಾನಕೋಶವಾದ ಕಣಜ ಡಾಟ್ ಇನ್   ಸಂಗ್ರಹಿಸಿ ಸಾರ್ವಜನಿಕ ಬಳಕೆಗೆ ಮೀಸಲಿರಿಸಲಾಗಿದೆ . ಇದಲ್ಲದೇ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಇಲ್ಲಿ ಓದಬಹುದಾಗಿದೆ .ಸೋಮಾರಿಗಳಾದ ನಾವು ಪುಸ್ತಕ ಮಳಿಗೆಗೆ ತೆರಳದೆ ಅನ್ ಲೈನ್ ಸಂತೆಯಂಗಡಿಯಿಂದ ಪುಸ್ತಕಗಳನ್ನು  ಅಯ್ಕೆ ಮಾಡಿ ಮನೆಯ ಬಾಗಿಲಿಗೆ ಬರುವಂತೆ ಮಾಡಬಹುದಾಗಿದೆ . ಅಮೇಜéಾನ್ ,ಪ್ಲಿಪ್ಕಾರ್ಟ್ ,ಸ್ನ್ಯಾಫ್ಡಿಲ್ ನಂತಹ ಅನ್ಲೈನ್ ಶಾಫಿಂಗ್ ತಾಣ ಸ್ವಪ್ನ , ಟೋಟಲ್ ಕನ್ನಡ ,ನವಕನರ್ಾಟಕದಂತಹ ಪ್ರಕಾಶಕ ಜಾಲತಾಣಗಳ ಮೂಲಕ ಪುಸ್ತಕ ಖರೀದಿಸಬಹುದಾಗಿದೆ .ನೂರು ಇನ್ನೂರು ಪುಟಗಳ ಪುಸ್ತಕಗಳನ್ನು ಓದಿ ಅಥರ್ೈಸಿಕೊಳ್ಳುವಷ್ಟು ತಾಳ್ಮೆ ಇಲ್ಲದ ನಮ್ಮ ಮನಸ್ಥಿತಿಯನ್ನರಿತ ಕೇಲವಾರು ಲೇಖಕರು , ಪ್ರಕಾಶಕರು , ತಮ್ಮ ಪುಸ್ತಕಗಳನ್ನು ಶ್ರವ್ಯ ಮಾಧ್ಯಮಕ್ಕಿಳಿಸುವ ಮೂಲಕ ಪುಸ್ತಕ ಜಗತ್ತಿನಲ್ಲಿ  ಕ್ರಾಂತಿಯನ್ನು  ಮಾಡಿಲಾರಂಭಿಸಿದ್ದಾರೆ . ಈ  ಪರಿಕಲ್ಪನೆಯನ್ನು  ಅಡೀಯೊ ಬುಕ್ (ಚಿಣಜಠಛಠಠಞ ) ಎನ್ನುವರು .ಪುಸ್ತಕಗಳು ಮಾತನಾಡುವ ಮೂಲಕ ಓದುವ ಕೆಲಸಕ್ಕೆ ಪೂರ್ಣ ವಿರಾಮ ಹಾಕಿ , ಸಮಯ ಉಳಿಸುವುದಲ್ಲದೆ ಕೇಳಿಸಿಕೊಳ್ಳುದರೊಂದಿಗೆ ಇತರ ಕಾರ್ಯಗಳಲ್ಲಿ ವ್ಯಕ್ತಿ ತನ್ನನ್ನು ತೋಡಗಿಸಿಕೊಳ್ಳಬಹುದು .ಕನ್ನಡದಲ್ಲಿ ಉಮೇಶ್ರವರ ದಿ ಲಾಸ್ಟ್ ಲೆಚ್ಚರ್ (ಅನುವಾದ ಕೃತಿ ) , ಯು .ಆರ್. ಅನಂತ ಮೂತರ್ಿಗಳ  'ಸಂಸ್ಕಾರ ' , ಎಸ್ .ಎಲ್ .ಬೈರಪ್ಪನವರ ಕೇಲವು ಕಾದಂಬರಿಗಳು ,ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣ ಕಥೆಗಳ ಸಂಗ್ರಹ , ವಸುಧೇಂದ್ರರ  "ನಮ್ಮಮ್ಮ ಅಂದ್ರೆ ನಂಗಿಷ್ಟ ", ಚಂದ್ರಶೇಖರ ಕಂಬಾರರ ಸಿಂಗಾರವ್ವ ಮತ್ತು ಅರಮನೆ ಮುಂತಾದ ಕೃತಿಗಳ ಅಡಿಯೋ ಪುಸ್ತಕಗಳು ಬುಕ್ ಟಾಕ್ ,ಟೋಟೆಲ್ ಕನ್ನಡ . ಕಾಂ ಗಳಲ್ಲಿ ದೊರೆಯುತ್ತದೆ.ಕನ್ನಡ ಅಕ್ಷರಗಳನ್ನು ನಾವು ಓದದೆ ಸಾಫ್ಟ್ವೇರ್ಗಳೆ ಓದಿ ಹೇಳುವ ತಾಂತ್ರಿಕ ಪ್ರವೃತ್ತಿಗಳ ಬೆಳವಣಿಗೆಯು ಇತ್ತಿಚ್ಚಿನ ದಿನಗಳಲ್ಲಿ  ಪ್ರಾರಂಭವಾಗಿದೆ . ಕಣಜ .ಕಾಂ ನಲ್ಲಿ   "ಈ - ಸ್ಪೀಕ್ "ಎಂಬ ಮುಕ್ತ ಸಾಪ್ಟ್ವೇರ್ ಅನ್ನು ಓದುಗರ ಅನುಕೂಲಕ್ಕಾಗಿ ಉಚಿತವಾಗಿ ನೀಡಲಾಗುತ್ತಿದೆ .ಇಂತಹ ಅನೇಕ ಸಾಫ್ಟ್ ವೇರ್ಗಳ ಮೂಲಕ ಪುಸ್ತಕ ಓದಿಸಿ , ಮೂಕ ಶೋತೃಗಳಾಗಬಹುದು .ಸಂಸ್ಕಾರ , ಚೋಮನ ದುಡಿ , ಬೇರು ಘಟಶ್ರಾದ್ಧ ,ಅವಸ್ಥೆ ,ಪರಸಂಗದ ಗೆಂಡ್ಡೆ ತಿಮ್ಮ ಬುಜಂಗಯ್ಯನ ದಶಾವತಾರ ,ನಾಯಿ ನೇರಳು , ಗುಲಾಬಿ ಟಾಕೀಸು , ಕುಬಿ ಮತ್ತು ಇಯಾಲದಂತಹ , ಕನ್ನಡದ ಶ್ರೇಷ್ಠ ಕಾದಂಬರಿ ಆಧಾರಿತ ಸಿನಿಮಾಗಳ,ಸಣ್ಣ ಕಥೆಗಳನ್ನಾಧರಿಸಿದ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಥೆಗಾರ , ಮಾಲ್ಗುಡಿ ಡೇಸ್ ನಂತಹ ಧಾರವಾಹಿಗಳ ಸಮಗ್ರದ ವಿಡೀಯೊ ಸಿಡಿ , ರಂಗಾಯಣ , ನಿನಾಸಂ ಸಂಸ್ಥೆಗಳು ಹೊರತರುವ  ಗೋಕುಲ ನಿರ್ಗಮನ , ಗಾಂಧಿ ಬಂದ , ಮಲೆಗಳಲ್ಲಿ ಮದುಮಗಳಂತಹ ನಾಟಕ ದೃಶ್ಯಗಳು  ,ಸಾಹಿತಿಗಳ ಕುರಿತ ವಿಮಶರ್ಾತ್ಮ ಸಾಕ್ಷ್ಯ ಚಿತ್ರಗಳು ವಿಡಿಯೋಗಳು  ಬುಕ್ ರೂಪದಲ್ಲಿ ಓದಿನ ಸೋಗಡನ್ನು ದೃಶ್ಯ ವಿಕ್ಷಣೆಯ ಮೂಲಕ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ . ವಿಡಿಯೋ ಬುಕ್ ಗಳು ಸಾಮಾನ್ಯವಾಗಿ ಎಲ್ಲಾ ಪುಸ್ತಕದಂಗಡಿ ಮತ್ತು ಅನ್ಲೈನ್ನಲ್ಲಿ ದೊರೆಯುತ್ತದೆ .ಒಟ್ಟಿನಲ್ಲಿ ಭಾವ ಶೂನ್ಯವಾದ ಯುವ ಮನಸ್ಸುಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳಯಬೇಕು .ಅಗ ಮಾತ್ರ ಭಾವ ಅಭಿವ್ಯಕ್ತಿಯ ಕನ್ನಡ ಮನಸುಗಳನ್ನು ರೂಪಿಸಲು ಸಾಧ್ಯ .ಮಾರ್ಗ ಯಾವುದಾದರೂ ಸಾಹಿತ್ಯ ರಸ ಅಸ್ವಾದನೆ ಮುಖ್ಯ ಗುರಿಯಾಗಿರಬೇಕು . ನೀವು ಪುಸ್ತಕಗಳನ್ನು ಓದಿದರೆ ,ಪುಸ್ತಕಗಳು ಬದುಕನ್ನು ನಿರೂಪಿಸುವ ರಹದಾರಿಯಾಗುದರಲ್ಲಿ ಸಂಶಯವಿಲ್ಲ .ಓದು ಸಾರ್ಥಕತೆಯ ಸಂಕೇತ .

ಮುಸ್ತಫ .ಕೆ.ಹೆಚ್
ಪ್ರಥಮ ಎಂ.ಎ.ಕನ್ನಡ ವಿಭಾಗ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಮಂಗಳಗಂಗೋತ್ರಿ ,
ಮಂಗಳೂರು .