ಸೋಮವಾರ, ಅಕ್ಟೋಬರ್ 13, 2014

ಇಂಗ್ಲೀಷ್‍ನಲ್ಲಿ ಫೇಲಾದಾಗ…!

ಈ ಮಾತು ನನ್ನ ತಲೆಯಲ್ಲಿ ಸದಾ ಕೊರೆಯುತ್ತಿತ್ತು. ಭಯದಿಂದಲೋ ಅಥವಾ ಐದು ನೂರು ರೂಪಾಯಿ ಸುಮ್ಮನೆ ನಷ್ಟವಾಗುತ್ತದೋ ಎಂಬ ಜಿಪುಣತನದಿಂದಲೊ ಆ ಕೆಲಸಕ್ಕೆ ಕೈ ಹಾಕಲಿಲ್ಲ.
ಇನ್ನು ಕಷ್ಟ ಪಟ್ಟು ಓದಿದ ಪ್ರತಿಯೊಂದು ಇಂಗ್ಲೀಷ್ ಪದಗಳು ಪರೀಕ್ಷಾ ಕೊಠಡಿಯಲ್ಲಿ ಕುಳಿತಾಕ್ಷಣ ಮರೆತು ಹೋಗುತ್ತಿತ್ತು. ಆಗ ಕೆಲವು ಸಹಪಾಠಿಗಳು ಹೇಳಿದ ಮಾತು ತಲೆಯೊಳಕ್ಕೆ ಹೊಕ್ಕಿದ್ದೂ ಉಂಟು. ಅದೇನೆಂದರೆ ಪುಟ ತುಂಬಿಸುವ ಕೆಲಸ ಮಾಡು, ಒಂದು ಪುಟಕ್ಕೆ 1 ಅಂಕದಂತೆ 40 ಪುಟಗಳ ಉತ್ತರ ಪತ್ರಿಕೆಗೆ 40 ಅಂಕಗಳು ದೊರೆಯುತ್ತದೆ ಎಂಬ ಮಾತು ಅಶರೀರವಾಣಿಯಂತೆ ಪರೀಕ್ಷಾ ಕೊಠಡಿಯಲ್ಲಿ ಪ್ರತಿದ್ವನಿಸುವಂತೆ ಭಾಸವಾಗುತ್ತಿತ್ತು. ವಿಧಿ ಇಲ್ಲದೆ ಹಾಲ್ ಟಿಕೆಟ್‍ನ ಹಿಂಬದಿಯಲ್ಲಿರುವ ರೂಲ್ಸ್ ಅಂಡ್ ರೆಗ್ಯುಲೇಷನ್‍ಗಳನ್ನು ಸ್ಪುಟವಾಗಿ ಅಚ್ಚೂತ್ತಿದಂತೆ ಉತ್ತರ ಪತ್ರಿಕೆಯ ಮೇಲೆ ನಕಲಿಸುತ್ತಿದ್ದೆ.
ಆದರೂ ತರಗತಿಯಲ್ಲಿ ಆಂಗ್ಲ ಭಾಷೆಯೊಂದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತ್ತೆ ವಿನಹಃ ಉಳಿದ ಎಲ್ಲಾ ವಿಷಯಗಳಲ್ಲೂ ಫಸ್ಟ್ ಕ್ಲಾಸ್ ದೊರಕುತ್ತಿತ್ತು. ಬ್ರಿಟನ್ನಿನ ಪರಕೀಯ ಭಾಷೆಯೊಂದು ನನ್ನ ಒಂದು ವರ್ಷದ ಕಾಲೇಜು ಲೈಫನ್ನೇ ನುಂಗಿ ಹಾಕಿತ್ತು. ನನ್ನ ಗೆಳೆಯರಲ್ಲಾ ಸ್ನಾತಕೋತ್ತರ ಪದವಿಗಾಗಿ ವಿಶ್ವವಿದ್ಯಾನಿಲಯಗಳಿಗೆ ಸೇರಿಕೊಂಡ್ರು. ಆದರೆ ನಾನೇನು ಮಾಡುವುದು? ಪ್ರಶ್ನೆ ಹಾಕುವುದು ಬಿಟ್ಟರೆ ನನಗೆ ಏನೂ ಉಳಿದಿರಲಿಲ್ಲ. ಕಾಲ ಮಿಂಚಿತ್ತು.  ನಾನು  ನಾಲಾಯಕ್ಕಾಗಿದ್ದೆ, ಯಾರಿಗೂ ಬೇಡದವನು . ನನ್ನ ಬಳಿ ಮಾತನಾಡುವುದೇ ತಪ್ಪು ಎಂಬ ತಿರ್ಮಾನಕ್ಕೆ ಕೆಲವು ಗೆಳಯರು ಬಂದು ನಿಂತಿದ್ದರು. ನನ್ನ ಮನಸ್ಸು ಮಾತ್ರ ಎರಡು ದಿನಗಳಲ್ಲಿ ಮತ್ತದೇ ಹುಡುಗಾಡಿಕೆಯ ರಹದಾರಿಯನ್ನು ತುಳಿಯಿತು.
ಮನೆಯವರು, ಪರಿಚಯದವರು ಕೇಳುವ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿದ್ರು ಉತ್ತರಿಸುವಷ್ಟು ದೈರ್ಯ ನನಗಿರಲಿಲ್ಲ. ಏಕೆ ಎಂ.ಎ ಮಾಡ್ಲಿಲ್ಲ ? ಸಬ್ಜೆಕ್ಟ್ ಪೆಂಡಿಂಗ್ ಇದ್ಯಾ ? ಎಷ್ಟು ವರ್ಷಂತ ಓದ್ತಿಯಾ ? ಯಾವುದಾದ್ರೂ ಕಂಪೆನಿಯಲ್ಲಿ ಸೇರಿಕೊಳ್ಳುವುದಕ್ಕೇನು? ಪಾಪ ನಿಮ್ಮಪ್ಪ ಕಷ್ಟ ಪಟ್ಟು ದುಡಿದು ಇಷ್ಟು ವರ್ಷ ಸಾಕಿ, ಬಿಎ ತನಕ ಓದ್ಸಿದ್ದಾರೆ. ಇನ್ನಾದ್ರೂ ಅವರನ್ನು ನೋಡ್ಕೊ… ಈ ಪ್ರಶ್ನೆಗಳು ಮತ್ತೆ ಮತ್ತೆ ನನ್ನನ್ನು ಸಂಕಷ್ಟಕ್ಕೆ ದುಡುತ್ತಿದ್ದವು.
ಪೋಲಿ ತಿರುಗುವ ಕೆಲ್ಸ ಬಿಟ್ರೆ ಬೇರೆನೂ ಇರ್ಲಿಲ್ಲ. ಮನೆಯವರ ಒತ್ತಾಯಕ್ಕೆ ಮಣಿದು ಉದ್ಯೋಗ ಮಾಹಿತಿ ಪತ್ರಿಕೆಯಲ್ಲಿ ಬರುವ ಎಲ್ಲಾ ಸರಕಾರಿ ಜಾಹೀರಾತುಗಳಿಗೆ ಅರ್ಜಿ ಸಲ್ಲಿಸುವುದು ನನ್ನ ದೈನಂದಿನ ಕಾಯಕವಾಗಿತ್ತು. ಕಾಲೇಜ್ ಹೋಗೊವಾಗ್ಲೆ ಕುಂಬಕರ್ಣನ ಅಪರಾವತಾರದಂತೆ 8 ಗಂಟೆಯವರೆಗೆ ಮಲಗುವ ನಾನು, ಕಾಲೇಜು ಶಿಕ್ಷಣ ಮುಗಿದ ನಂತರ ಅದನ್ನು ಹೆಚ್ಚುವರಿಯಾಗಿ 10 ಗಂಟೆಗೆ ಮುಂದೂಡಲಾರಂಭಿಸಿದೆ.
ಬೆಳಗಾಗುತ್ತಿದ್ದಂತೆ ಅಪ್ಪ, ಅಮ್ಮನ ಸುಪ್ರಭಾತ ಕೇಳುವಂತಾಯಿತು. ದಿನ ಕಳೆದಂತೆ ಬೆಳಗಾಗುದನ್ನು ಶಪಿಸುವಷ್ಟು, ಮನೆ ಎಂದಾಕ್ಷಣ ಭಯ ಪಡುವಷ್ಟು ಜಿಗುಪ್ಸೆಯನ್ನು ಆಂಗ್ಲ ಭಾಷೆ ಎಂಬ ಕಂಟಕ ಪ್ರಾಯವು ತಂದೊಡ್ಡಿತು.್ತ
ಕಾಲೇಜು ಬಿಟ್ಟ 6 ತಿಂಗಳಲ್ಲೆ ಮತ್ತೆ 7ನೇ ಸೆಮಿಸ್ಟರ್ (ಮರು ಪರೀಕ್ಷೆ ) ಬರೆಯುವ ಅವಕಾಶ ದೊರೆಯಿತು. ದೇವರ ದಯೆಯೋ ಅಥವಾ ಉಪನ್ಯಾಸಕರ ಕೃಪಾಕಟಾಕ್ಷವೋ ಹೇಗೋ ಈ ಕಬ್ಬಿಣದ ಕಡಲೆಯನ್ನು ಜಗಿದು ಬಿಟ್ಟಿದ್ದೆ. ಅಂದರೆ, ಜಸ್ಟ್ ಮೂವತ್ತೈದು (35) ಅಂಕ ಪಡೆದು ಉತ್ತೀರ್ಣನಾಗಿದ್ದೆ. ಆಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಇಡೀ ಇಂಗ್ಲೇಡನ್ನೇ ಗೆದ್ದಷ್ಟು ಖುಷಿ ಅಂದು ನನ್ನಲ್ಲಿ ಒಡ ಮೂಡಿತ್ತು. ಅದ್ರೇ ಏನ್ ಮಾಡೋದು ಎಂ.ಎ ಮಾಡೋ ನನ್ನ ಕನಸಿಗೆ ತಣ್ಣೀರು ಅದಾಗ್ಲೆ ಬಿದ್ದಿತ್ತು. ಸ್ನಾತಕೋತ್ತರ ತರಗತಿಗಳು ಆರಂಭವಾಗಿ ಸುಮಾರು 4 ತಿಂಗಳು ಸಂದಿತ್ತು!
ದಂಡ ಪಿಂಡವಾಗಿ ಬದುಕೋ ಬದುಕಿದ್ಯಲ್ಲ ಅದರಷ್ಟು ಕಠೊರವಾದ ಶಿಕ್ಷೆ ಮತ್ತೊಂದಿಲ್ಲ. ಅದ್ರು
ಬದುಕಬೇಕಲ್ವಾ ? ಹಾಗಂತ ಸಾಯೊ ನಿರ್ಧಾರಕ್ಕೆ ನಾನು ಬಂದೆ ಅಂದ್ಕೊಡ್ರೆ ಅದು ನಿಮ್ಮ ತಪ್ಪು .
ನಾನು ನೇರವಾಗಿ ಬೆಂಗಳೂರು ಬಸ್ಸತ್ತಿದ್ದೆ. ಅಲ್ಲಿ ಸ್ವಲ್ಪ ದಿನ ಕೆಲ್ಸ ಮಾಡಿ ಬೇಸತ್ತು .ಮತ್ತೆ ಮನೆ ಕಡೆ ಮುಖ ಮಾಡ್ದೆ.
ಅಂತು ನನ್ನ ಕನಸಿಗೆ ಜೀವ ಬರೋ ದಿನವೊಂದಿತ್ತು. 2014ನೇ ಸಾಲಿನ ಸ್ನಾತಕೋತ್ತರ ತರಗತಿಗಳ ದಾಖಲಾತಿ ಪ್ರಾರಂಭವಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯದ ಎಂ.ಎ. ಕನ್ನಡ ವಿಭಾಗಕ್ಕೆ ಅರ್ಜಿ ಸಲ್ಲಿಸಿದೆ. ಸ್ವಲ್ಪ ಮಟ್ಟಿಗೆ ಪರ್ವಾಗಿಲ್ಲಾ ಅನ್ನೊ ಫರ್ಸೆಂಟೆಜ್ (ಅಂಕ)ಗಳು ಇರೋದ್ರಿಂದ ಮೇರಿಟ್‍ನಲ್ಲಿ ಸಿಟ್ ಸಿಕ್ತು. ಮಂಗಳ ಗಂಗೋತ್ರಿ ಸೆರ್ಕೊಂಡು ಒಂದು ತಿಂಗಳಾಗಿದೆ. ಭವಿಷ್ಯದ ಬಗ್ಗೆ ಸುಂದರ ಕನಸೂ ಮೂಡಿದೆ…
- ಮುಸ್ತಫ.ಕೆ.ಹೆಚ್
ಪ್ರಥಮ ಎಂ.ಎ ಕನ್ನಡ ವಿಭಾಗ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳೂರು ವಿಶ್ವವಿದ್ಯಾನಿಲಯ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ