ಶನಿವಾರ, ಅಕ್ಟೋಬರ್ 11, 2014


ಕ್ಯಾಂಪಸ್ನ್ನೊಳಗೊಂದು ರಾಜಕೀಯ ಕ್ರಾಂತಿಯ ಅಗತ್ಯತೆ ..

ದೇಶದ ರಾಜಕಾರಣಕ್ಕೆ ವಿದ್ಯಾವಂತರು ಬರಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯ.ಪದವಿ ಸ್ನಾತಕೋತ್ತರ ಪದವಿ ಪಡೆದು ರಾಜಕಾರಣದಲ್ಲಿ ಮಿಂಚಿದವರ ಸಂಖ್ಯೆ ಅತೀ ವಿರಳ.
ಮೂರನೇ ಕ್ಲಾಸ್ಗೆ ಶಾಲೆಬಿಟ್ಟವರು SSLC ಫೇಲಾದವರು, ಅಪ್ಪ ರಾಜಕಾರಣಿ ಎಂಬ ಕಾರಣಕ್ಕೆ ಮಗ ರಾಜಕೀಯಕ್ಕೆ ಪ್ರವೇಶಿಸಿದವರು, ರೌಡಿ ಶೀಟರ್,ಶಾಲೆ ಮುಖವನ್ನು ಕಂಡರಿಯದವನು , ಕಡ್ಲೆ ಮಾರುವವನು ಇವರೆ ನಮ್ಮನ್ನಾಳುವ ಜನ ಪ್ರತಿನಿಧಿಗಳು. ಇನ್ನೂ ರಾಜ್ಯ ಮತ್ತು ರಾಷ್ಟ್ರದ ಮೇಲ್ಮನೆ ಕೆಳಮನೆಗಳು ಬಿಳಿ ಕೂದಲಿನ ಬುಡ್ಡಾಗಳಿಂದಲೆ ತುಂಬಿತುಳುಕುತ್ತಿದೆ. ಅದು ಸಾಲದೆಂಬಂತೆ ವಿಧಾನ ಸಭೆ ಸಂಸತ್ಗಳಲ್ಲಿ ನಿದ್ರೆ ಮಾಡ್ಲಿಕ್ಕಾಗೆ ಬರುವ ಜನಪ್ರತಿನಿಧಿಗಳು ಹಲವರು. ಕಾರಣ ಯುವಜನತೆಯ ರಾಜಕೀಯ ಅಸಡ್ಡೆ ಮತ್ತು ಕ್ಯಾಂಪಸ್ಗಳಲ್ಲಿ ರಾಜಕೀಯ ಕ್ರಾಂತಿ ರೂಪುಗೊಳ್ಳದಿರುವುದು .
ಅಂತರ್ಜಾಲ ಚಿತ್ರ



ಏನ್ ಗುರು ಎಂ.ಎ, ಎಂ.ಕಾಂ ,ಎಂಎಸ್ಸಿ ,ಮುಗಿಸಿ ಏನ್ ಮಾಡ್ತಿರ ಅಂತ ಕೇಳಿದ್ರೆ , ಮತ್ತೆನು ಉಪನ್ಯಾಸಕನಾಗಿ ಹೋಗ್ತಿನಿ ,ಇಲ್ಲಾ ಸಾಪ್ಟ್ವೇರ್ ಫೀಲ್ಡ್ ಅಯ್ಕೆ ಮಾಡಿಕೊಳ್ಳುತೇನೆ ಅನ್ನುವ ಜನರೆ ಹೆಚ್ಚು .
ಅಲ್ಲಾ ಬಾಸ್ ರಾಜಕಾರಣಿಯಾಗಿ ದೇಶ ಸೇವೆ ಮಾಡಿ ಅಂದ್ರೆ ,ರಾಜಕೀಯನಾ ? ! ಅದು ಭ್ರಷ್ಟರ ಸಂತೆ , ಕಚ್ಡಾ ಫೀಲ್ಢ್ ಬೇಡ ಗುರು ಅನ್ನುತ್ತಾರೆ. ಪರ್ವಾಗಲ್ಲಾ ಕಚ್ಡಾ ಫೀಲ್ಡ್ನ ಕ್ಲಿನ್ ಮಾಡುವ ಬನ್ನಿ ಅಂದರೆ ನಿನ್ಗೆ ತಲೆ ಕೆಟ್ಟಿದೆ ಬಾಯಿ ಮುಚ್ಚಿಕೊಂಡು ಹೋಗು ಅನ್ನುವವರೆ ಆಧಿಕ.ಕಾರಣ ಆರಾಮವಾಗಿ ಟೆಕ್ ಪಾರ್ಕ್ಗಳಲ್ಲಿ ಎಸಿ ಗಾಳಿಗೆ ಮೈ ಒಡ್ಡಿ ,ವಿದೇಶಿ ಕಂಪೆನಿಗಳು ನೀಡುವ ಲಕ್ಷಾಂತರ ರೂಪಾಯಿಗಳು ಭಾರತದ ಗುಡಿಸಲುಗಳೊಳಗಿನ ಯಾತನೆ ಮರೆಮಾಚಿ ನಮ್ಮಂತಹ ಯುವಕರನ್ನು ಅಂಧಕಾರಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ.
ನಾವೇನ್ ಕಾರೇಷನ್ ಶಾಲೆಗಳಲ್ಲಿ ಬಿಸಿಯೂಟ ತಿಂದು ಓದಿದವರಲ್ಲ ನಮ್ಮ ತಂದೆ ತಾಯಿ ಲಕ್ಷಗಟ್ಟಲೆ ಸ್ಕೂಲು ,ಕಾಲೇಜುಗಳಿಗೆ ಡೊನೆಷನ್ ಇನ್ವಸ್ಟ್ ಮಾಡಿದ್ದಾರೆ .ಅದನ್ನ ಬಡ್ಡಿ ಸಮೇತ ಗಳಿಸಿಕೊಳ್ಳಲು ಸಮಾಜ ಸೇವೆ ರಾಜಕೀಯ ಕ್ಷೇತ್ರ ಸೂಕ್ತವಲ್ಲವೆಂಬುದು ಇಂದಿನ ಯುವಜನಾಂಗದ ಅಂಭೋಣ.
ಇನ್ನೂ ಕ್ಯಾಂಪಸ್ಗಳಲ್ಲಿ ನಮ್ಮಂತಹ ಯುವಕರ ಪೊಲಿಟಿಕಲ್ ನಾಲೇಜ್ ಶೂನ್ಯ .ಬಡ್ಡಿಮಗಂದು ಯಾರ್ ಬಾಸ್ ನಮ್ಮ ರಾಜ್ಯದ ಶಿಕ್ಷಣ ಮಂತ್ರಿ ಅಂದ್ರೆ ? ಗೂಗಲ್ ನೋಡಿ ಹೇಳ್ತಿನಿ ಅನ್ನುವವರೆ ಹೆಚ್ಚು.
ಫೇಸ್ ಬುಕ್ ,ವಾಟ್ಸಫ್ಗಳಲ್ಲಿ ಕಾಲಹರಣ ಮಾಡೋ ನಮ್ಮಂತಹ ಯುವಕರು ಸದಾ ಇಂಟರ್ನೇಟ್ ಗುರು ಎಂದೇನಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಾರೆ ವಿನಹ ರಾಜಕೀಯ ಚಿಂತನೆಗೆ ತಮ್ಮನ್ನ ಒಗ್ಗೂಡಿಸಿಕೊಳ್ಳಲು ಯತ್ನಿಸುವುದಿಲ್ಲ.
ಕ್ಯಾಂಪಸ್ ಸದಾ ಕಲರ್ ಪುಲ್. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳು , ಕ್ಯಾಂಪಸ್ ನಾಯಕರು ಎಂಬ ಪರಿಕಲ್ಪನೆ ಒಂದು ರೀತಿಯ ಯಾಂತ್ರಿಕ , ಸಾಂಪ್ರದಾಯಿಕ ಪರಿಕಲ್ಪನೆಗಳಾಗಿದೆಯೇ ಹೊರತು ದೇಶಿಯ ಕ್ರಾಂತಿಯ ಕಿಚ್ಚು ವಿದ್ಯಾಥರ್ಿಗಳಲ್ಲಿ ಒಡಮೂಡಿಸುವಲ್ಲಿ ಯಶಸ್ವಿಯಾಗಿಲ್ಲ.
ರಾಜಕಾರಣ ,ಸಮಾಜಸೇವೆ ಕ್ಯಾಂಪಸ್ನಿಂದಲೆ ಕ್ರಾಂತಿಯ ಕಿಡಿಯಾಗಿ ಹುಟ್ಟ ಬೇಕು. ಅ ಕಿಡಿ ದೇಶ ಬೆಳಗಿಸುವಂತಿರಬೇಕೆ ವಿನಹ , ದ್ವೇಷದ ಬೀಜ ಬಿತ್ತುವ ಕೆಲಸವನ್ನಲ್ಲ .ದಿನದಿಂದ ದಿನಕ್ಕೆ ಕ್ಯಾಂಪಸ್ ಮನಸ್ಸುಗಳಲ್ಲಿ ಜಾತ್ಯಾತೀತ ರಾಜಕೀಯ ಚಿಂತನೆ ಮರೆಯಾಗಿ ,ರಾಷ್ಟ್ರೀಯ ಪಕ್ಷಗಳ ,ಪಾರ್ಟಿ basseed ತತ್ವ ಚಿಂತನೆಗೆ ರೂಪಿತವಾಗುತ್ತಿದೆ.
ಯುನಿವರ್ಸಲ್ ಪರಿಕಲ್ಪನೆಯನ್ನು ವಿಶ್ವವಿದ್ಯಾನಿಲಯಗಳಲ್ಲಿ ಪಸರಿಸಬೇಕಾದರೆ ಸ್ವತಂತ್ರವಾದ ,ಪಕ್ಷರಹಿತವಾದ ಯುವಶಕ್ತಿಯನ್ನು ಒಂದುಗೂಡಿಸಬೇಕು. ರಾಜಕೀಯ ಪಕ್ಷಗಳ ದಲ್ಲಾಳಿಗಳಾದ ಕೆಲವು ವಿದ್ಯಾರ್ಥಿ ಸಂಘಟನೆಗಳ ಅಗತ್ಯತೆ ನಮಗಿಲ್ಲ ಎಂದು ಸಾಬೀತುಪಡಿಸಬೇಕು. ಅವರು ತಮ್ಮ ರಾಜಕೀಯ ಪಕ್ಷದ ಅಭ್ಯುದಯಕ್ಕಾಗಿ ಪರಿಶ್ರಮಿಸುತ್ತಿದ್ದಾರೆ ಅಲ್ಲಿ ವಿದ್ಯಾರ್ಥಿಗಳ ಯಾವುದೇ ಬೇಡಿಕೆಗಳು ಈಡೇರುದಿಲ್ಲವೆಂಬ ನಿಜಾಂಶವನ್ನು ಮನಗಾಣಬೇಕು .ಎಲ್ಲಕ್ಕಿಂತ ಮೀಗಿಲಾಗಿ ಚುನಾವಣೆಯ ಸಮಯದಲ್ಲಿ ರಜೆ ಸಿಕ್ತು ಎಂಬ ಕಾರಣಕ್ಕೆ ಕುಂಡಿಗೆ ಬಿಸಿಲು ತಾಕುವವರೆಗೆ ಮಲಗುದನ್ನು ಬಿಟ್ಟು ತಪ್ಪದೆ ಮತಧಾನವನ್ನು ಮಾಡಿ ,ನಿಮ್ಮ ಹಕ್ಕನ್ನು ಚಲಾಯಿಸಿ.
ಸ್ನೇಹಿತರೆ ನಾನು ನೀವು ಕ್ರಿಕೆಟ್ ನೋಡುವ ಜೋಸ್ ಅನ್ನು ರಾಜಕೀಯ ಹಾಗೂ ಮತಧಾನ ಪ್ರಕ್ರಿಯೆಯಲ್ಲಿ ತೊರಿಸಿದರೆ ಖಂಡಿತವಾಗಿಯು ಭಾರತ ಉದ್ದಾರವಾದಿತು.
ಕೊನೆದಾಗಿ ಫೇಸ್ಬುಕ್ ,ಟ್ವಿಟ್ಟರ್ ,ವಾಟ್ಸಫ್ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಕ್ರಾಂತಿ ಮಾಡ್ತಿವಿ ಅಂತ ಸ್ಟೇಟಸ್ ಅಪ್ಲೋಡ್ ಮಾಡಿ ಕಮೆಂಟ್ಸ್ ,ಲೈಕ್ ಪಡೆಯುದಕ್ಕಿಂತ ರಸ್ತೆಗಿಳಿದು ಕಾರ್ಯಪ್ರವೃತ್ತರಾಗಿ. ಪ್ರತಿಭಟಿಸುವ ಮನೋಧರ್ಮ ಬೆಳಸಿ.
ಹುಟ್ಟು ಅಕಸ್ಮಿಕ ,ಸಾವು ಖಚಿತ ,ಮತ್ಯಾಕ್ ತಡ !
ಮುಸ್ತಫ .ಕೆ.ಹೆಚ್
ಪ್ರಥಮ ಎಂ.ಎ.ಕನ್ನಡ ವಿಭಾಗ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ ,


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ